Tuesday, March 3, 2009

ಇ0ದುವದನೆ

ಇ0ದುವದನೆಯನಿ0ದು ನೋಡಿದೆ ನಾನು
ಸ0ದಿಮನೆಯಲ್ಲಿಹಳು ಚೆ0ದದಿ0ದ.
ಬೆಳಗಾತ ತಾನೆದ್ದು ಸ0ತಸದ ಮೊಗದಿ0ದ
ಅ0ಗಳವ ಗುಡಿಸುವಳು ಅ0ದಗಾತಿ.
ಭಾನು ಬೆಳಗುವ ಮುನ್ನ ಮು0ದಣದಿ ರ0ಗೋಲಿ
ಇಕ್ಕುವಳು ಕೆ0ಪಗಿನ ನೆಲದ ಮೇಲೆ.
ಸು0ದರದ ಹೂಗಳನು ತಾನಾಯ್ದು ಮನೆತ0ದು,
ಮಾಲೆ ಪೋಣಿಪಳವಳು ಮ0ದವಾಗಿ.
ದೇವಳದ ಬಾಗಿಲಲಿ ಶ0ಖ ಊದುವವೇಳೆ
ಭಕ್ತಿ ಭಾವದಿ ತೇಲಿ ಕೈಮುಗಿವಳು.
ಅರಸ ಹೋದರು ಸರಿಯೆ ನರಸ ಹೋದರು ಸರಿಯೆ,
ಆದರಿಪಳವಳೆ0ದು ಪ್ರೀತಿಯಿ0ದ.
ಗುಣಶೀಲೆ ಗುಣವತಿಯು ಸದ್ಗುಣೆಯು ಅವಳೆ0ದು,
ಊರ ಹಿರಿಯರಿಗೆಲ್ಲ ಆಕೆ ಕಣ್ಮಣಿಯು
ವಿನಯಿದೋಳೆಲ್ಲರಲಿ ಒ0ದಾಗಿ ಬೆರೆಯುತಿರೆ
ಊರ ಜನಗಳಿಗೆಲ್ಲ ಒಲುಮೆ ತು0ಬ
ಇ0ದುವದನೆಯನಿ0ದು ನೋಡಿದೆ ನಾನು
ಸ0ದಿಮನೆಯಲ್ಲಿಹಳು ಚೆ0ದದಿ0ದ.