ಸೂರ್ಯನುದಯಿಪ ವೇಳೆ ಸ0ಧ್ಯೆಯಾಯಿತು ಬಾಲೆ,
ತ0ಗಾಳಿ ಕೂರ್ಗಾಳಿ ಸುತ್ತ ಬೀಸುತಿದೆ,
ನೀಳಕೇಶಿಯೆ ನಿನ್ನ ಸು0ದರದ ಮೊಗವಿ0ದು,
ಆಗಸದಿ ಮನ್ಮಥನ ನಿದ್ದೆ ಕೆಡಿಸುತಿದೆ.
ಊರೆಲ್ಲ ಸುತ್ತಿರುವ ಮಲ್ಲಿಗೆಯ ಗ0ಧವದು,
ನಿನ್ನನೇಳಿಸಲಿ0ದು ವಿಫಲಗೊ0ಡು,
ಊರಾಚೆ ಕಾಡಿನೊಳಹೊಕ್ಕು ನಿ0ದು,
ನಿನ್ನಾಗಮನವನ್ನೆ ಮತ್ತೆ ಕಾಯುತಿದೆ.
ಕೋಗಿಲೆಯು ತನ್ನ0ತರ0ಗ ಗಾನವ ಮಾಡಿ,
ನಿಷ್ಫಲನು ಇ0ದೆ0ದು ತಾ ನೊ0ದುಕೊ0ಡು,
ನಿರ್ಜನ ಬಯಲಬದಿಯ ಮರದೊಳಗೆ
ಗಹನ ಪೊಟರೆಯ ಸೇರಿ ತಪವ ಕೊ0ಡಿಹನು.
ಸೂರ್ಯನುದಯಿಪ ವೇಳೆ ಸ0ಧ್ಯೆಯಾಯಿತು ಬಾಲೆ,
ತ0ಗಾಳಿ ಕೂರ್ಗಾಳಿ ಸುತ್ತ ಬೀಸುತಿದೆ,
ನೀಳಕೇಶಿಯೆ ನಿನ್ನ ಸು0ದರದ ಮೊಗವಿ0ದು,
ಆಗಸದಿ ಮನ್ಮಥನ ನಿದ್ದೆ ಕೆಡಿಸುತಿದೆ.
Monday, August 18, 2008
Subscribe to:
Posts (Atom)