Tuesday, July 3, 2018

ಓಹ್ ಚೆರಿ ! ನಾ ನಿನಗೆ ಆಭಾರಿ !

ಓಹ್ ಚೆರಿ  ! ನಾ ನಿನಗೆ ಆಭಾರಿ !

ಶಾಲೆಯಾ ಹಾದಿಯಲಿ ಕಂಡ ನೇರಳೆಹಣ್ಣು
ತಿಂದಿದ್ದ ನೆನಪ ಮರುಜೀವಗೊಳಿಸಿದಕೆ

ಓರಗೆಯ ಮನೆಯಲ್ಲಿ ಬಿದ್ದ ನೇರಳೆಯನ್ನು
ಸ್ನೇಹಿತನ ಜೊತೆ ಮೆದ್ದ ನೆನಪ ತರಿಸಿದಕೆ

ತೋಪು ದಾರಿಯ ಮೇಲೆ ಹರಡಿರುವ ನೇರಳೆಯ
ಅಕ್ಕನೊಂದಿಗೆ ಸವಿದ ಸ್ಮೃತಿಯನುದಿಸಿದಕೆ

ನೆಂಟರಿಷ್ಟರ ಮನೆಯ ಅಂಗಳದ ಹೆಮ್ಮರದಿ
ಬೆಳೆದ ನೇರಳೆಹಣ್ಣ ಮತ್ತೆ ಉಣಿಸಿದಕೆ

ಓಹ್ ಚೆರಿ  ! ನಾ ನಿನಗೆ ಆಭಾರಿ !



No comments: