Monday, July 2, 2018

ಗೆಳತಿ ನೀನಿಲ್ಲದೇ..

ಗೆಳತಿ ನೀನಿಲ್ಲದೇ.. ನನ್ನ ಹಾಡುಗಳೆಲ್ಲ
ಎಲ್ಲಿ ತಟ್ಟುತ್ತಿವೆ ಕಿವುಡು ಮನಕೆ 

ಜೊತೆಗೆ ನೀನಿಲ್ಲದೇ.. ಎನ್ನ ಗೀತಗಳೆಲ್ಲ
ಎಲ್ಲಿ ಕೇಳುತ್ತಿವೆ ಜಗದ ಕಿವಿಗೆ

ಬಳಿಯೆ ನೀನಿಲ್ಲದೇ.. ಮನದ ಭಾವಗಳೆಲ್ಲ
ಎಲ್ಲಿ ಮುಟ್ಟುತ್ತಿವೆ ಅರಿತ ಎದೆಗೆ

ಬಳಿಯೆ ನೀನಿಲ್ಲದೇ.. ಮಧುರ ಮಾತುಗಳೆಲ್ಲ
ಎಲ್ಲಿ ತಾಕುತ್ತಿವೆ ಮೃದು ಹೃದಯಕೆ

ಮತ್ತು ನೀನಲ್ಲದೇ.. ಎನ್ನೆದೆಯ ಕೋಶದಲಿ
ಶಬ್ದಗಳ ಓದುವರು ಎಂದು ತಿಳಿದೆ

ಮತ್ತೆ ನೀನಲ್ಲದೇ.. ಮಾನಸ ಬೃಂದಾವನದಿ
ನೀರನುಣಿಸುವರೆಂದು ನೀನು ತಿಳಿದೆ

ಮಾಯೆ ನೀನಲ್ಲದೇ .. ಯಾರಿಹರು ನನ್ನನ್ನು
ಜಗದುದರದಲ್ಲಿ ತುಂಬಲೆಂದು ತಿಳಿದೆ.. 
ಜಗದುದರದಲ್ಲಿ ತುಂಬಲೆಂದು ತಿಳಿದೆ..  

No comments: