ಭಾವನೆಗಳೇ ಕರಗಿ ಹೋಗಿ ಕೊರಳ ನಾದ ಉಲಿಯಲಿ
ಕಾಮನೆಗಳೇ ಕಳೆದು ಹೋಗಿ ಸಲಿಲ ನಾದ ಲಯದಲಿ
ಬೆಟ್ಟಗಳೇ ಸರಿದು ಹೋಗಿ ಮರುತ ವೇಗ ತಳೆಯಲು
ಕಲ್ಲುಗಳೇ ಒಡೆದು ಹೋಗಿ ಒಸರ ನೀರು ಹರಿಯಲು
ಬಂಧಗಳೇ ಕಡಿದು ಹೋಗಿ ಎನ್ನ ಮುಕ್ತಗೊಳಿಸಲು
ಇಹದ ನಂಟು ಹರಿದು ಹೋಗಿ ಭವವ ಮೀರಿ ಬೆಳೆಯಲು
ಎನ್ನ ನಿಜವ ತಿಳಿಯಲು
No comments:
Post a Comment